ಬದುಕನ್ನು ಸುಂದರವಾಗಿಸಿಕೊಳ್ಳಿ :
ಎಚ್. ನಾಗರಾಜ ಶೆಟ್ಟಿ
ಮಕ್ಕಳ ಬದುಕನ್ನು ರೂಪಿಸುವಲ್ಲಿ ನಿರ್ಣಯಿಸುವಲ್ಲಿ ಹಿಂದೆ ವಿದ್ಯಾರ್ಥಿಗಳೇ ನಿರ್ಧಾರ ಮಾಡುತ್ತಿದ್ದರು. ಈಗ ಹಾಗಲ್ಲ ಪೋಷಕರೇ ವಿದ್ಯಾರ್ಥಿಗಳ ಬದುಕಿಗೆ ಒಂದು ದಾರಿದೀಪವಾಗುತ್ತಾರೆ. ವಿದ್ಯಾರ್ಥಿಗಳ ಬದುಕಿನ ಪ್ರತಿಯೊಂದು ಹಂತಗಳಲ್ಲಿ ಪೋಷಕರು ಮಾರ್ಗದರ್ಶಕರಾಗುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗುರು ಹಿರಿಯರೊಂದಿಗೆ ಉತ್ತಮ ನಡತೆಗಳನ್ನು ಇಟ್ಟುಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಬೇಕು. ಎಂದು ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ ಅವರು ಹೇಳಿದರು.